ಉದ್ದೇಶಗಳು ಮತ್ತು ಧೇಯೋದ್ದೇಶಗಳು (Aims & Objectives)

5. ಉದ್ದೇಶಗಳು
ಎ)
ಬಡ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಅನಾಥ ಮತ್ತು ವಿಧವೆಯರ ಮಕ್ಕಳಿಗೆ ಶಿಕ್ಷಣ ನೀಡುವುದು ಅಥವಾ ಪ್ರೋತ್ಸಾಹಧನ ನೀಡಿ ಶೈಕ್ಷಣಿಕ ಪ್ರಗತಿಯನ್ನು ಸಾಧಿಸಲು ನೆರವಾಗುವುದು.
ಬಿ)
ಸಮಾಜದ ಬಡ ಜನರ ಮದುವೆಗಳಿಗೆ ನೆರವಾಗುವುದು ಅಥವಾ ಸಮಾಜದ ವತಿಯಿಂದ ಸಾಮೂಹಿಕ ಕಲ್ಯಾಣ ಕಾರ್ಯಕ್ರಮಗಳನ್ನು ಆಯೋಜಿಸುವುದು.
ಸಿ)
ಸಮಾಜದ ಮಹಿಳೆಯರ ಮತ್ತು ಮಕ್ಕಳ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಮುನ್ನಡೆಗಾಗಿ ಅವಶ್ಯಕತೆಗನುಗುಣವಾಗಿ ವಿವಿಧ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ತರಬೇತಿ ನೀಡುವುದು.
ಡಿ)
ಸಮಾಜದ ಯಾವುದೇ ಭಾಗಗಳಲ್ಲಿ ವಾಸಿಸುವ ಜನರಿಗೆ ಉಂಟಾಗುವ ನೆರೆ ಹಾವಳಿ, ಬರಗಾಲ ಮುಂತಾದ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಸಾಧ್ಯವಾದಷ್ಟು ನೆರವಾಗುವುದು.
ಇ)
ಸಮಾಜದ ಬಡ ನಿರುದ್ಯೋಗಿ ಯುವಕ ಯುವತಿಯರಿಗೆ ಸ್ವಯಂ ಉದ್ಯೋಗ ಹೊಂದಲು ಅನುಕೂಲವಾಗುವಂತೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ನೆರವಿನೊಂದಿಗೆ ಆರ್ಥಿಕ ನೆರವನ್ನು ಒದಗಿಸುವುದು.
ಎಫ್)
ಸಮಾಜದ ವಿಕಲಚೇತನ ವ್ಯಕ್ತಿಗಳಿಗೆ ಹಾಗೂ ವೃದ್ಧರಿಗೆ ಶಕ್ತಿಗನುಗುಣವಾಗಿ ಆರ್ಥಿಕ ನೆರವು ಅಥವಾ ಇನ್ನಿತರ ನೆರವನ್ನು ನೀಡಿ ನೆರವಾಗುವುದು.
6. ಮೇಲ್ಕಂಡ ಉದ್ದೇಶಗಳ ಸಾಧನೆಗಾಗಿ ಈ ಕೆಳಕಂಡ ಕಾರ್ಯಗಳನ್ನು ಮಾಡುವುದು
ನಿಯಮಾವಳಿಗಳು & ವಿಶೇಷ ಸೂಚನೆಗಳು
7
ಸಂಘದ ಉದ್ಯಮವನ್ನು (ಅದು ಯಾವುದೇ ರೀತಿಯದ್ದೇ ಇರಲಿ) ನಡೆಸುವಾಗ, ಅದರ ಲಾಭಾಂಶವನ್ನು ಸದಸ್ಯರ ನಡುವೆ ಅಥವಾ ಬಂಡವಾಳದಾರರ ನಡುವೆ ಹಂಚಿಕೆ ಮಾಡಕೂಡದು. ಸಂಘದ ಉದ್ದೇಶಗಳನ್ನು ಪೂರೈಸಲು ಮತ್ತು ಸಂಸ್ಥೆಯನ್ನು ಬೆಳೆಸಲು ಮಾತ್ರ ವಿನಿಯೋಗಿಸುವುದು.
8
ಉದ್ಯೋಗಸ್ಥರು ತಮ್ಮ ಆದಾಯದ ನಿಯಮಿತವಾದ ದಾನವನ್ನು ರಾಜ್ಯ ಸಂಘದ ಉನ್ನತಿಗಾಗಿ ಅಥವಾ ಕಾರ್ಯಕಾರಿ ಸಮಿತಿ ತೀರ್ಮಾನದಂತೆ ಗೌರವಧನ ನೀಡಬಹುದು.
9
ದಿನಾಂಕ : 29-08-1993 ರಂದು ನಡೆದ ಮಹಾ ಸಭೆಯಲ್ಲಿ ಈ ಕೆಳಕಂಡ ನಿಯಮಾವಳಿಗಳು ಜಾರಿಗೆ ತಂದಿರುವುದು ಈ ಕೆಳಗೆ ತೋರಿಸಲ್ಪಟ್ಟಿರುತ್ತದೆ.